ಕಬ್ಬಿನ ಗದ್ದೆಗೆ ಬೆಂಕಿ: ಲಕ್ಷಾಂತರ ರೂಪಾಯಿ ಹಾನಿ

Wednesday, 19 Jan, 4.56 pm

ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಬಳಿಯ ಮದ್ನೂರಿನಲ್ಲಿ ಬುಧವಾರ, ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಭಸ್ಮವಾಗಿದೆ. ಸುಮಾರು ಮೂರು ಎಕರೆ ಬೆಳೆ ನಾಶವಾಗಿದೆ.

ಮದ್ನೂರಿನ ಮಂಜುನಾಥ ಶಿರನಾಲ್ಕರ್ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಅವಘಡ ನಡೆದಿದೆ.