ಬೆಂಗಳೂರು: ಕನ್ನಡಿಗರೊಬ್ಬರು ಇದೀಗ ವಿದೇಶದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಹಾಗೆ ಸದ್ದಿಗೂ ಸುದ್ದಿಗೂ ಪ್ರಸಿದ್ಧಿಗೂ ಕಾರಣರಾಗಿರುವ ವ್ಯಕ್ತಿಯ ಹೆಸರು ಸಿದ್. ಹೌದು.. ವಿದೇಶದಲ್ಲಿ ಸಿದ್ ಎಂದೇ ಗುರುತಿಸಲ್ಪಡುತ್ತಿರುವ ಸಿದ್ಧಾರ್ಥ್ ಆಚಾರ್ಯ ಆಸ್ಟ್ರೇಲಿಯನ್ ಸಿನಿಮಾವೊಂದಕ್ಕೆ ಸ್ವತಂತ್ರವಾಗಿ ಪೂರ್ಣಪ್ರಮಾಣದ ಹಿನ್ನೆಲೆ ಸಂಗೀತ (ಬಿಜಿಎಂ) ನೀಡುವ ಜೊತೆಗೆ ಸಂಗೀತ ಸಂಯೋಜನೆಯನ್ನು ಕೂಡ ಮಾಡಿದ್ದಾರೆ.